Wednesday, December 6, 2017

ಆಳ್ವಾರಿಗೆ ನಮನ

     ಆಳ್ವಾಸ್ ನುಡಿ ಸಿರಿ ೨೦೧೭ ರನಾನು ಪ್ರಥಮವಾಗಿ ಭಾಗವಹಿದೆ. ನುಡಿ ಸಿರಿಯಲ್ಲಿ ಹನ್ನೆರಡು ಬೃಹತ್ತು ವೇದಿಕೆ ಗಳಲ್ಲಿ ನಮ್ಮ ಪ್ರಾಚೀನ ಕನ್ನಡ ಸಂಸ್ಕೃತಿಯ ನಾಟಕ,ನೃತ್ಯ,ಜಾನಪದ,ಗಾಯನ,ಮಲ್ಲಯುದ್ಧ ..... ಕಾರ್ಯಕ್ರಮ ಗಳು ಮನ ತುಂಬುವಂತೆ ಹೃದಯ ಸೂರೆಗೊಂಡಿತು. ಆಳ್ವಾಸ್ ನುಡಿ ಸಿರಿಗೆ ಸಾಟಿ ಆಳ್ವಾಸ್ ನುಡಿಸಿರಿಯೇ.ಕರುನಾಡಿಗೆ ಒಬ್ಬರೇ ಶ್ರೀ ಮೋಹನ್ ಆಳ್ವಾ. ಅವರ ಕನ್ನಡ ಅಭಿಮಾನ ಮತ್ತು ಅತಿಥಿ ಸತ್ಕಾರ ಅರಬ್ಬೀ ಸಾಗರದಷ್ಟೇ ಆಳ ಮತ್ತು ವಿಸ್ತಾರ . ಶ್ರೀ ಕೃಷ್ಣ ದೇವರಾಯ ಸಾಹಿತ್ಯ ಸಾಮ್ರಾಜ್ಯ ಮತ್ತೆ ಮರಳಿ ತನ್ನ ಸಾಹಿತ್ಯ ಸಿರಿ ವ್ಯಭವ ಸಾರಿದಂತಿತ್ತು. ತಾಯಿ ಭುವನೇಶ್ವರಿ ಅರೋಗ್ಯ ಮತ್ತು ಅಷ್ಟ ಐಶ್ವರ್ಯಾ ಕೊಟ್ಟು ಇಂತ ಕನ್ನಡ ಸಾಹಿತ್ಯ ಸಮ್ಮೇಳನ ಸತತ ನೆಡಸಲೆಂದು ಪ್ರಾಥಿಸುತ್ತೇನೆ.

No comments:

Post a Comment