Wednesday, December 6, 2017

ಆಳ್ವಾರಿಗೆ ನಮನ

     ಆಳ್ವಾಸ್ ನುಡಿ ಸಿರಿ ೨೦೧೭ ರನಾನು ಪ್ರಥಮವಾಗಿ ಭಾಗವಹಿದೆ. ನುಡಿ ಸಿರಿಯಲ್ಲಿ ಹನ್ನೆರಡು ಬೃಹತ್ತು ವೇದಿಕೆ ಗಳಲ್ಲಿ ನಮ್ಮ ಪ್ರಾಚೀನ ಕನ್ನಡ ಸಂಸ್ಕೃತಿಯ ನಾಟಕ,ನೃತ್ಯ,ಜಾನಪದ,ಗಾಯನ,ಮಲ್ಲಯುದ್ಧ ..... ಕಾರ್ಯಕ್ರಮ ಗಳು ಮನ ತುಂಬುವಂತೆ ಹೃದಯ ಸೂರೆಗೊಂಡಿತು. ಆಳ್ವಾಸ್ ನುಡಿ ಸಿರಿಗೆ ಸಾಟಿ ಆಳ್ವಾಸ್ ನುಡಿಸಿರಿಯೇ.ಕರುನಾಡಿಗೆ ಒಬ್ಬರೇ ಶ್ರೀ ಮೋಹನ್ ಆಳ್ವಾ. ಅವರ ಕನ್ನಡ ಅಭಿಮಾನ ಮತ್ತು ಅತಿಥಿ ಸತ್ಕಾರ ಅರಬ್ಬೀ ಸಾಗರದಷ್ಟೇ ಆಳ ಮತ್ತು ವಿಸ್ತಾರ . ಶ್ರೀ ಕೃಷ್ಣ ದೇವರಾಯ ಸಾಹಿತ್ಯ ಸಾಮ್ರಾಜ್ಯ ಮತ್ತೆ ಮರಳಿ ತನ್ನ ಸಾಹಿತ್ಯ ಸಿರಿ ವ್ಯಭವ ಸಾರಿದಂತಿತ್ತು. ತಾಯಿ ಭುವನೇಶ್ವರಿ ಅರೋಗ್ಯ ಮತ್ತು ಅಷ್ಟ ಐಶ್ವರ್ಯಾ ಕೊಟ್ಟು ಇಂತ ಕನ್ನಡ ಸಾಹಿತ್ಯ ಸಮ್ಮೇಳನ ಸತತ ನೆಡಸಲೆಂದು ಪ್ರಾಥಿಸುತ್ತೇನೆ.

Saturday, October 21, 2017

ನಂದಾ ದೀಪ

ಜೂಜರೆ ಲಕ್ಶ್ಮಣ ರಾವ್ ಬಳ್ಳಾರಿ  ಇವರು  ನನ್ನ  ಗೆಳಯ. ನಮ್ಮ ಪರಿಚಯ ಮೂರು ವರ್ಷದಿಂದ. ನಾವು ಒಬ್ಬರನೊಬ್ಬರು  ಇದುವರೆಗೂ ನೋಡಿಲ್ಲಾ. ಇವರು  ನನ್ನ ಬ್ಲಾಗ್ ಈ ದೀಪದ  ಛಾಯಾಚಿತ್ರ ಕಂಡು ಇದಕ್ಕೆ ಹೊಂದುವಂತೆ  ಸೊಗಸಾದ  ಕವನ ಬರೆದಿದ್ದಾರೆ.  ನನಗೆ ತುಂಬಾ ಸಂತೋಷವಾಗಿದೆ.  ಈ ಸಂತೋಷ ನಿಮ್ಮಲ್ಲಿ  ಹಂಚಿಕೊಳ್ಳುತ್ತೇನೆ. 

ನನ್ನ ಹೂ ಗಳು



Wednesday, August 9, 2017

ಮಂತ್ರಾಲಯದ ಮಾಹಾತ್ಮ

ವಿಜೇಯೇಂದ್ರ ರ ಶಿಷ್ಯತ್ತೋಮನೆ 
ದೀನರ ಪಾಲಿಗೆ ಮಂತ್ರಾಲಯದ ಮಾಹಾತ್ಮನೆ 
     ನಿನ್ನ ದರುಶನ  ಕಾಣಲೆಂದು 
     ಮಂಚಾಲೆಗೆ ಬರಲು  ಸಂಕಲ್ಪಿಸಿದರೆ 
     ಮನೆಯಲಿ ಬಿಡಿಗಾಸು ಸಹ ಬರಿದಾಗಿಸಿದೆ 
     ಹಾದಿ ಕಾಣದಂತೆ ನಡು ಬಿದಿಯಲ್ಲಿಟ್ಟೆ 
     ಕೃಷ್ಣ ಗಾರುಡಿಗನಂತಾದೆ ಏಕೆ ಪ್ರಭುವೇ 
ವಿಜೇಯೇಂದ್ರ ರ ಶಿಷ್ಯತ್ತೋಮನೆ 
ದೀನರ ಪಾಲಿಗೆ ಮಂತ್ರಾಲಯದ ಮಾಹಾತ್ಮನೆ
     ಮುಂಜಾನೆ ಮಜ್ಜನ ನಂತರ 
     ಮನೋ ಮಾರ್ಗದಿ ನಿನ್ನಯ ನೆನವೆ 
     ಮಡದಿ ಮಕ್ಕಳ ಸಮೇತ  ಈ 
     ತಿರುಕನ ಕರೆಸೋಕೋ ದೊರೆಯೆ 
      ಸೇವೆ ಮಾಡುವ ಕೃಪೆ ತೋರೋ  ತಂದೆ 
ವಿಜೇಯೇಂದ್ರ ರ ಶಿಷ್ಯತ್ತೋಮನೆ 
ದೀನರ ಪಾಲಿಗೆ ಮಂತ್ರಾಲಯದ ಮಾಹಾತ್ಮನೆ

Friday, April 21, 2017

ಸೆಲ್ಫಿ

ಈ ಛಾಯಾಚಿತ್ರ  2012 ರಲ್ಲಿ  ಬ್ಲಾಗ್ ನಲ್ಲಿ  ಹಾಕಿದೆ.    ಆ ಸಮಯದಲ್ಲಿ  ಅಂತಹ  ಜನ  ಬರಲಿಲ್ಲಾ .  ಈಗ ಭಾನುವಾರ   ಸಾಕಷ್ಟು   ಜನ  ಬರುತ್ತಾರೆ. ಈ ಬಂಡೆ  ಮೇಲೆ ಹತ್ತಿ  ಸೆಲ್ಫಿ  ತೇಗುದುಕೊಳ್ಳುತ್ತಾರೆ . 

Saturday, April 8, 2017

ಅಪ್ಪನ ಪ್ರೀತಿಯೇ

     ನಾನು ನನ್ನ  ೪೮ ವರುಷಕ್ಕೆ  ನನ್ನ ತಂದೆ ಬಗ್ಗೆ  ಹಾಡು  ಬರೆದೆ.  ನನ್ನ ಮಗ  ಅಭಿ ೧೫ ವರುಷಕ್ಕೆ  ನನ್ನ ಬಗ್ಗೆ   ಈ  ಹಾಡು ಬರೆದ.  ನಾನು  ಪ್ರಥಮ  ಬಿ ಕಾಂ ನಲ್ಲಿ  ರಾಜ್ಯಮಟ್ಟದ ಭಾರ ಎತ್ತುವ ಸ್ಪರ್ಧೆಗೆ ಮತ್ತು ಕುಸ್ತಿ ಗೆ ಹೋಗಿದ್ದೆ. ಅಭಿ ೯ ನೇ ತರಗತಿಗೆ   ರಾಷ್ಟ್ರ  ಮಟ್ಟದಲ್ಲಿ ಓಟ ದ  ಸ್ಪರ್ಧೆಗೆ  ವಿಶಾಖ ಪಟ್ಟಣ ಕ್ಕೆ  ಹೋಗಿ  ಆಡಿದ.  ಇದು  ಜೀವನದಲ್ಲಿ  ಪ್ರಥಮ  ಸಂತೋಷ . 

ಸಾಧ್ಯನಾ ..?