Saturday, September 7, 2019

"ಕತ್ತಲು ಮತ್ತು ಬೆಳಕು ".

ನನ್ನ
ಇತ್ತೀಚಿಗೆ ನನ್ನ ಮನಸ್ಸಿನಲ್ಲಿ ಜೀವನದಿ ರೀತಿಯಲ್ಲಿ ಹರಿಯುತ್ತಿರುವ ವಿಷಯ ಅಂದ್ರೆ "ಕತ್ತಲು ಮತ್ತು ಬೆಳಕು ". ನೋಡುಕೆ ಸಾಧಾರಣ ಅಂತ ಕ್ಷಣ ಅನಿಸಿದರೂ...ನಮ್ಮ ಜೀವಕೋಟಿಯ ಸೃಷ್ಟಿ ರಹಸ್ಯ ಅಡಗಿದೆ.ನಾನು ಅರಿತಿರುವ ನಾಲ್ಕು ಸಾಲು ನಿಮ್ಮಲ್ಲಿ ಹಂಚಿ ಕೊಳ್ಳಬೇಕುನಿಸಿತು.

ಗೆಳೆಯರಿಗೆ ನಮಸ್ಕಾರ.
ಬೆಳಕು.. ಸಾಕ್ಷಿ
ಕತ್ತಲು.. ಆತ್ಮ ಸಾಕ್ಷಿ
ಬೆಳಕು.. ಜೀವ
ಕತ್ತಲು.. ಜೀವಾತ್ಮ
ಬೆಳಕು.. ಆಕಾರ
ಕತ್ತಲು.. ನಿರಾಕಾರ
ಬೆಳಕು.. ಜನ್ಮ
ಕತ್ತಲು.. ಜನ್ಮಾಂತರ
ಬೆಳಕು.. ಭಕ್ತ
ಕತ್ತಲು.. ಭಕ್ತಿ
ಬೆಳಕು.. ಮುಕ್ತಿ
ಕತ್ತಲು.. ಮೋಕ್ಷ
ಬೆಳಕು.. ಸುಖ:
ಕತ್ತಲು.. ಸಂತೋಷ
ಬೆಳಕು.. ಮಳೆ
ಕತ್ತಲು.. ಸೆಲೆ
ಬೆಳಕು..ಹೂವು
ಕತ್ತಲು.. ಮಕರಂದ
ಬೆಳಕು.. ಮರಣ
ಕತ್ತಲು.. ಮರಣಾoತರ
ಬೆಳಕು.. ಮುಖ
ಕತ್ತಲು.. ಅಂತರ್ ಮುಖ
ಬೆಳಕು..ಮಾತು
ಕತ್ತಲು.. ‌ಮೌನ
ಬೆಳಕು.. ಬಿನ್ನಾಣ
ಕತ್ತಲು.. ಒಡ್ಯಾಣ
ಬೆಳಕು.. ಬಣ್ಣ ಬಣ್ಣ
ಕತ್ತಲು.. ಕರಿ ಸುಣ್ಣ
ಬೆಳಕು.. ಆಡಂಬರ
ಕತ್ತಲು.. ಗಾಢಾಂಧಕಾರ
ಬೆಳಕು.. ಜ್ಞಾನ
ಕತ್ತಲು.. ಅಧ್ಯಾತ್ಮ
ಬೆಳಕು.. ವೇದ
ಕತ್ತಲು.. ವೇದಾಂತ
ಬೆಳಕು.. ಕಣ್ಣು
ಕತ್ತಲು.. ಅಂತರ್ ಕಣ್ಣು
ಬೆಳಕು.. ಮರ
ಕತ್ತಲು.. ಬೇರು
ಬೆಳಕು.. ಮಿಂಚು
ಕತ್ತಲು.. ಗುಡುಗು
ಬೆಳಕು.. ನಿಸರ್ಗ
ಕತ್ತಲು.. ಭೂ ಗರ್ಭ
ಬೆಳಕು.. ಅಂಡ
ಕತ್ತಲು..ಬ್ರಹ್ಮಾಂಡ
ಬೆಳಕು.. ಚಂಚಲ
ಕತ್ತಲು.. ನಿಶ್ಚಲ
ಬೆಳಕು.. ಮಂತ್ರ
ಕತ್ತಲು.. ಯಂತ್ರ
ಬೆಳಕು.. ಧೂಳು
ಕತ್ತಲು.. ಗಾಳಿ
ಬೆಳಕು.. ಶ್ರೀಗಂಧ
ಕತ್ತಲು.. ಗಂಧ
ಬೆಳಕು.. ಜಪ
ಕತ್ತಲು.. ತಪ
ಬೆಳಕು.. ಉಚ್ವಾಸ
ಕತ್ತಲು.. ನಿಚ್ಛಾಸ
ಬೆಳಕು.. ಅಂಬರ
ಕತ್ತಲು.. ಪಾತಾಳ
ಬೆಳಕು.. ಶಿವೆ
ಕತ್ತಲು.. ಶಿವ
ಶ್ರೀ ರಾಘವೇಂದ್ರಾಯ ನಮ:

No comments:

Post a Comment